ಒಂದಾನೊಂದು ಕಾಲದಲ್ಲಿ"ಹಸ್ತಲಾಘವ"
ಪ್ರಪಂಚ ಇಂದು ವೈರಸ್ ಕಾರಣದಿಂದ ನರಳ್ತಾಇದೆ. ಸಾಮಾನ್ಯರಿಂದ ಅಸಮಾನ್ಯ ಜನರು ಈ ವೈರಸಿಂದ ಪಡಬಾರದ ವ್ಯಥೆ ಪಡ್ತಿದಾರೆ.
ನೆನಪಿರಲಿ ಆಕಸ್ಮಾತ್ ಈ ವೈರಸ್ ಕೇವಲ ಪ್ರಪಂಚದ ಯಾವುದೇ ಒಂದುಪ್ರದೇಶಕ್ಕೆ ಸೀಮಿತವಾಗಿದ್ದಲ್ಲಿ ಶ್ರೀಮಂತರ ದರ್ಬಾರು ಮತ್ತು ದೌಲ್ಲತ್ತಿಗೇನು ಕಡಿಮೆ ಇರ್ತಿದಿಲ್ಲ. ಈ ವಿಚಾರದಲ್ಲಿ ಕೊರೋನಾ ಎಲ್ಲರಿಗೂ ಸಮಪಾಲು ಹಂಚಿದೆ. ನಾನು ಶ್ರೀಮಂತ, ಶಕ್ತಿವಂತ ಮತ್ತು ಸರ್ವಾಧಿಕಾರಿ ಅಂತಾ ಒಣ ಕೊಬ್ಬಿನಿಂದ ಮೆರೆದವರಿಗೆ ಕೊರೋನಾ ಶಕ್ತಿಯ ಪರಿಚಯ ಮಾಡಿಸಿದೆ.
ಇರಲಿ ವಿಷಯ ಇದಲ್ಲ. ಈ ವೈರಸ್ ಕಾರಣದಿಂದ ಲಾಕ್ ಡೌನ್ ನಂತರದ ನಮ್ಮ ಜಿವನಶೈಲಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆಗೆ ಕಾರಣವಾಗುತ್ತಿದೆ, ಅದರಲ್ಲಿ ಕೆಲವು ಧನಾತ್ಮಕ ಮತ್ತು ಇನ್ನಕೇಲವು ಋಣಾತ್ಮಕ.
ಭರತಭೂಮಿ ಇಷ್ಟು ದಶಕಗಳ ಕಾಲ ಪ್ರಕೃತಿ ವಿರುದ್ಧವಾದ ನಮ್ಮ ಕೆಲಸಗಳನ್ನು ಸಹಿಸಿಕೊಂಡು ಬಂದಿದೆ. ಈಗ ವೈರಸ್ ಕಾರಣದಿಂದ ಅನಿವಾರ್ಯವಾಗಿ ಅಥವಾ ಬಲವಂತವಾಗಿ ನಾವು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಆಗಲೆಬೇಕು. ಅದರಲ್ಲಿ ಮೊದಲನೆಯದಾಗಿ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದು ನಮಸ್ಕರಿಸುವುದು. ಈ ವೈರಸ್ ಕಾರಣದಿಂದ "ಒಂದಾನೊಂದು ಕಾಲದಲ್ಲಿp ಹಸ್ತಲಾಘವ" ಅಂತ 'ಹಸ್ತಲಾಘವ' ಇತಿಹಾಸ ಸೇರಿದರು ಆಶ್ಚರ್ಯವಿಲ್ಲ. ಎರಡು ಕೈಗಳನ್ನು ಜೋಡಿಸಿ ನಿಂತಾಗ "Hi, Hello" ಅಂತಾ ಬರುವುದಿಲ್ಲ ಸಹಜವಾಗಿ ಬರುವುದು ನಮಸ್ತೆ ಅಂತಾ. ಅದಕ್ಕೆ ಹಿರಿಯರು ಹೇಳಿದ್ದು ಹಿಂದುತ್ವ ಅನ್ನುವುದು ಜೀವನ ನಡೆಸುವ ಪದ್ಧತಿ. ಎಷ್ಟು ಸತ್ಯವಾದ ಮಾತು. ಇನ್ನೂ ತಿನ್ನುವ ವಿಚಾರದಲ್ಲಿ ಎನ್ ತಿನ್ನಬೇಕು, ಎಷ್ಟು ತಿನ್ನಬೇಕು ಅಂತಾನೂ ತಿಳಿಸಿದೆ. ಈಗ ಜಗತ್ತು ಅದನ್ನೆ ಫಾಲೋ ಮಾಡ್ತಿದೆ ಅಲ್ಲಾ !
ಎರಡನೆಯ ಬದಲಾವಣೆ ನಾವು ಭಾರತೀಯರು ವಿಶೇಷವಾಗಿ ವಿವಿಧ ರೀತಿಯ ತಿಂಡಿ, ತಿನಿಸುಗಳ ಪ್ರೀಯರು. ಕೇವಲ ಮನೆಯಲ್ಲಷ್ಟೆ ಅಲ್ಲ, ರಸ್ತೆ ಬದಿಯಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ತಿನ್ನದೇ ನಮಗೆ ಇರೋಕಾಗಲ್ಲ. ಈ ವೈರಸ್ ನಂತರ ಕಂಡ ಕಂಡಲ್ಲಿ ತಿನ್ನುವ ನಮ್ಮ ಆಸೆಗೆ ಅಂಕುಶ ಬೀಳಬಹುದು. ಯಾಕೆಂದರೆ ಸ್ವಚ್ಛತಾ ವಿಷಯದಲ್ಲಿ ನಾವು ಎಷ್ಟು ಜಾಗೃತರು ಅಂತಾ ಗೊತ್ತೆ ಇದೆ. ನಮ್ಮ ಹಿರಿಯರು ಊಟದ ನಂತರ ಆರೋಗ್ಯವಾದ ವಿಳೇದೆಲೆ ರೂಢಿ ಮಾಡಿಸಿದರೆ ನಾವು ಅದರೊಟ್ಟಿಗೆ ಆಧುನಿಕ ಒತ್ತಡದ ನೆಪದಲ್ಲಿ ಪಾನ್ ಮಸಾಲಾ, ತಂಬಾಕು ಮತ್ತು ಗುಟುಕಾ ಎಂಬ ಮಾರಕ ಚಟಕ್ಕೆ ದಾಸರಾಗಿರುವುದಲ್ಲದೆ ಅಗಿದು-ಜಗಿದು ಕಂಡ ಕಂಡಲ್ಲಿ ಉಗುಳುವುದನ್ನು ಕಾಯಕ ಮಾಡಿಕೊಂಡಿದೇವೆ. ಭವಿಷ್ಯದ ದಿನಗಳಲ್ಲಿ ಈ ವಸ್ತುಗಳನ್ನು ಬ್ಯಾನ್ ಆಗುವುದರಲ್ಲಿ ಸಂಶಯವಿಲ್ಲ.
ಮೂರನೆಯದಾಗಿ ಸ್ವಚ್ಛತಾ ವಿಷಯ. ಭಾರತ ಸರಕಾರ ಸ್ವಚ್ಛತೆಯ ಜಾಹೀರಾತಿಗಾಗಿ & ಸ್ವಚ್ಛತಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನ ಖರ್ಚು ಮಾಡುತ್ತೆ. ಇಷ್ಟು ಖರ್ಚು ಮಾಡುತ್ತಿರುವಾಗಲು ಆಗದ ಕೆಲಸ ಭವಿಷ್ಯದ ದಿನಗಳಲ್ಲಿ ವೈರಸ್ ಕಾರಣದಿಂದ ಬಲವಂತವಾಗಿ ನಮ್ಮ ಮೊದಲ ಆದ್ಯತೆ ಸ್ವಚ್ಛತೆ ಆಗಿರುತ್ತೆ. ಮೊದಲೇ ಹೇಳಿದಂತೆ ಕಂಡ ಕಂಡಲ್ಲಿ ಉಗುಳುವುದು, ಕಸ ಚೆಲ್ಲಿ ಪರಿಸರವನ್ನ ಹಾಳು ಮಾಡಿದರೆ ವೈರಸಗೆ ತಾಂಬೂಲ ಸಮೇತ ಆಮಂತ್ರಣ ಕೊಟ್ಟು ಮನೆಗೆ ಕರೆದಂತೆ ನೆನಪಿರಲಿ.
ಬರಲಿರುವ ದಿನಗಳಲ್ಲಿ ವೈಯಕ್ತಿಕ ಶುಚಿತ್ವದೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತಾ ಕಾರ್ಯದ ನಿರ್ವಹಣೆ ನಮ್ಮ ಹೊಣೆಯಾಗಲಿ. ಸರಕಾರಗಳು ಸ್ವಚ್ಛತಾ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಸಾವಿರಾರು ಕೋಟಿ ರೂಪಾಯಿಗಳು ಭವ್ಯ ಭಾರತದ ಅಭಿವೃದ್ಧಿಗೆ ಬಳಸುವಂತಾಗಲಿ.
ಈ ವೈರಸ್ ಜನರಿಗೆ ಮಾತ್ರವಲ್ಲ ಸರಕಾರ ಮತ್ತು ಜನಪ್ರತಿನಿಧಿಗಳು ಧನಾತ್ಮಕ ಬದಲಾವಣೆಗೆ ಯೋಚಿಸುವಂತೆ ಮಾಡಿದ್ದು ಸತ್ಯ. ಉದಾಹರಣೆಗೆ ಮಹಾರಾಷ್ಟ್ರದ ಧಾರಾವಿ ಪ್ರದೇಶ ಏಷ್ಯಾದ ಅತ್ಯಂತ ಕೊಳೆಗೇರಿ ಪ್ರದೇಶ ಅಂತಾ ಕುಖ್ಯಾತಿ ಪಡೆದಿದೆ. ಈ ಪ್ರದೇಶದ ಪಾಲಿಕೆ ಆಡಳಿತವನ್ನು ಸುಮಾರು ಎರಡುವರೆ ದಶಕಗಳಿಂದ ಈಗಿನ ಆಡಳಿತ ಪಕ್ಷ ಶಿವಸೇನೆ ಮಾಡುತ್ತಾ ಬಂದಿದೆ ಅವರಿಗಿಂತ ಮುಂಚೆ ಅವರ ಮೈತ್ರಿ ಪಕ್ಷ 'ಸ್ವಾತಂತ್ರ್ಯಕಾಲದ' ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ.
ಹಾಂ! ಈ ಪ್ರದೇಶ ಬಾಂದ್ರಾದ ಈಗಿನ ಮುಖ್ಯಮಂತ್ರಿಗಳ ನಿವಾಸದಿಂದ ಕೇವಲ 5ಕಿ.ಮೀ. ದೂರದಲ್ಲಿದೆ. 2.1 ಚದರ ಕಿ.ಮೀ ಸುತ್ತಳತೆಯಲ್ಲಿರುವ ಈ ಕೊಳಗೇರಿಯಲ್ಲಿ ಅಂದಾಜು 3.5 ಲಕ್ಷ ಜನ ವಾಸಿಸುತ್ತಿದ್ದಾರೆ. ಹಲವಾರು ಕೋಣೆಗಳಲ್ಲಿ 10 ರಿಂದ 15 ಮಂದಿ ವಾಸ್ತವ್ಯ ಮಾಡಿದ್ದಾರೆ. ಮುಂಬೈನ ಜನಸಾಂದ್ರತೆ ಒಂದು ಹೆಕ್ಟೇರಿಗೆ ಸರಾಸರಿ 228 ಮಂದಿ ಆಗಿದ್ದರೆ ಧಾರಾವಿಯಲ್ಲಿ ಅದು ಬರೋಬ್ಬರಿ 3846. ಇವತ್ತಿಗೂ ಈ ಪ್ರದೇಶದಲ್ಲಿ ಸರಿಯಾದ ಶೌಚಾಲಯಗಳ ವ್ಯವಸ್ಥೆ ಇಲ್ಲ.
ಈಗ ಈ ಕೊಳಗೇರಿ ಪ್ರದೇಶ ವೈರಸಿನಿಂದ ನರಳ್ತಾಇದೆ ಮತ್ತು ಸರಕಾರಕ್ಕೆ ಒಂದು ದೊಡ್ಡ ಸವಾಲಾಗಿದೆ. ದಶಕಗಳಿಂದಲೂ ಕೇವಲ "2.1 ಚದರ ಕಿ. ಮೀ. ಪ್ರದೇಶ" ಸ್ವಾರ್ಥ ರಾಜಕೀಯ ಕಾರಣ ಕನಿಷ್ಠ ಸೌಲಭ್ಯ ಮತ್ತು ಸೌಕರ್ಯ ಅಭಿವೃದ್ಧಿಯಿಂದ ವಂಚಿತವಾದ ಪ್ರದೇಶ ರಾಜಕಾರಣಿಗಳ ಮುಂದೆ ತಪ್ಪುಗಳ ಕನ್ನಡಿಯಾಗಿ ನಿಂತಿದೆ.
ಈ ಸಂದರ್ಭದಲ್ಲಿ ದೇಶದ ಪ್ರೀತಿಯ, ಹೆಮ್ಮೆಯ ದೂರದೃಷ್ಟಿತ್ವದ ಪ್ರಧಾನಮಂತಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಗೆ ವಿಶೇಷವಾದ ಧನ್ಯವಾದಗಳನ್ನು ನಾವೆಲ್ಲರೂ ಹೇಳಬೇಕು. ಯಾಕೆ ಅಂತಾನಾ? ಸುಮ್ಮನೆ ವಿಚಾರ ಮಾಡಿ,
* ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಮನೆಯ ಕನಸನ್ನು ಈಡೇರಿದ್ದು.
* ಪ್ರತಿ ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಮತ್ತು ಅಗತ್ಯ ಸೌಕರ್ಯ ಒದಗಿಸಿದರು.
* ಸಾಮಾನ್ಯ ವ್ಯಕ್ತಿಯನ್ನು ಬ್ಯಾಂಕಿನ ವ್ಯವಸ್ಥೆಗೆ ತಂದರು.
* ಸರಕಾರದ ಸೌಲಭ್ಯ ಮತ್ತು ಸೌಕರ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ವ್ಯವಸ್ಥೆ ಮಾಡಿದರು.
* ಸ್ವಚ್ಛ ಭಾರತದ ನನಸಿಗಾಗಿ ದುಡಿಯುತ್ತಿರುವರು.
* ಹೊಗೆ ಮುಕ್ತ ಭಾರತಕ್ಕಾಗಿ ಮನೆ ಮನೆಗೂ ಗ್ಯಾಸ್ ಸಂಪರ್ಕ ಮಾಡಿಸಿದರು.
ಇನ್ನೂ ಅನೇಕ ದೂರದೃಷ್ಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೋಳಿಸಿದ ಪರಿಣಾಮ ಇವತ್ತಿನ ಸಂಕಷ್ಟದ ಸ್ಥಿತಿಯಲ್ಲೂ ನಾವು ಸಮರ್ಥವಾಗಿ ಎದುರಿಸುವಂತಾಗಿದ್ದು.
ಈ ಯೋಜನೆಗಳು ಇಲ್ಲದ್ದಿದ್ದರೆ ಅಂತಾ ಒಮ್ಮೆ ಯೋಚನೆ ಮಾಡಿ. ಅಬ್ಬಾ!!!. ಬಹು ದೊಡ್ಡ ಗಂಡಾಂತರಿಂದ ನಾವು ಹೊರಬರ್ತಿದೇವೆ.
ಭವಿಷ್ಯದ ರೋಗ ರುಜಿನ ಅಥವಾ ಅಪಾಯಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಿ ಕೊಡಲಾರದಷ್ಟು ಸ್ವಾರ್ಥ ಅವಿವೇಕಿಗಳಾದರೆ ನಮ್ಮ ಸಾವಿಗೆ ನಾವೇ ಕುಣಿ ತೊಡಿದಂತೆ....

"ಪ್ರಧಾನಿಗಳು ದೆಹಲಿ ಕೆಂಪು ಕೋಟೆಯಿಂದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿ, ಬಯಲು ಶೌಚವನ್ನು ನಿಲ್ಲಿಸಿ ಎಂದು ಕರೆ ಕೊಟ್ಟಾಗ. ವ್ಯಂಗ್ಯಮಾಡಿದ ಸ್ವಾತಂತ್ರ್ಯ ಕಾಲದ ಪಕ್ಷ ವ ಆಡಳಿತ ಪಕ್ಷದ ರಾಜಕಾರಣಿಗಳಿಗೆ ಸಾವಿನ ಭಯ ಹುಟ್ಟಿಸಿರುವುದು ಅದೇ ಕನಿಷ್ಠ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದ ಧಾರಾವಿ."ಇವಾಗ ವೈದ್ಯಕೀಯ ಪರಿಕರಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿರುವ ಸರಕಾರಗಳು, ಬಹಳ ಹಿಂದೆಯೇ ಕನಿಷ್ಠ ದೂರದೃಷ್ಟಿ ಮೂಲಭೂತ ಸೌಕರ್ಯಗಳಿಗಾಗಿ ನೂರಾರು ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದ್ದರೆ ಇವತ್ತಿನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು. ಏನ್ ಮಾಡೋದು, 'ಕರ್ಮ' ನಾವು ಬಿತ್ತಿದ ಬೀಜದ ಬೆಳೆಯನ್ನೆ ಫಲವಾಗಿ ಕೊಡುವುದು. ಇನ್ನೂ ಎಷ್ಟು ಧಾರಾವಿ ರೀತಿಯ ಪ್ರದೇಶಗಳು ಇಂತಹ ಕರಾಳ ಅಧ್ಯಾಯಗಳನ್ನು ತೆರೆದು ನಿಂತಿವೆಯೋ!.
ಈ ಸಂದರ್ಭದಲ್ಲಿ ದೇಶದ ಪ್ರೀತಿಯ, ಹೆಮ್ಮೆಯ ದೂರದೃಷ್ಟಿತ್ವದ ಪ್ರಧಾನಮಂತಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಗೆ ವಿಶೇಷವಾದ ಧನ್ಯವಾದಗಳನ್ನು ನಾವೆಲ್ಲರೂ ಹೇಳಬೇಕು. ಯಾಕೆ ಅಂತಾನಾ? ಸುಮ್ಮನೆ ವಿಚಾರ ಮಾಡಿ,
* ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಮನೆಯ ಕನಸನ್ನು ಈಡೇರಿದ್ದು.
* ಪ್ರತಿ ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಮತ್ತು ಅಗತ್ಯ ಸೌಕರ್ಯ ಒದಗಿಸಿದರು.
* ಸಾಮಾನ್ಯ ವ್ಯಕ್ತಿಯನ್ನು ಬ್ಯಾಂಕಿನ ವ್ಯವಸ್ಥೆಗೆ ತಂದರು.
* ಸರಕಾರದ ಸೌಲಭ್ಯ ಮತ್ತು ಸೌಕರ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ವ್ಯವಸ್ಥೆ ಮಾಡಿದರು.
* ಸ್ವಚ್ಛ ಭಾರತದ ನನಸಿಗಾಗಿ ದುಡಿಯುತ್ತಿರುವರು.
* ಹೊಗೆ ಮುಕ್ತ ಭಾರತಕ್ಕಾಗಿ ಮನೆ ಮನೆಗೂ ಗ್ಯಾಸ್ ಸಂಪರ್ಕ ಮಾಡಿಸಿದರು.
ಇನ್ನೂ ಅನೇಕ ದೂರದೃಷ್ಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೋಳಿಸಿದ ಪರಿಣಾಮ ಇವತ್ತಿನ ಸಂಕಷ್ಟದ ಸ್ಥಿತಿಯಲ್ಲೂ ನಾವು ಸಮರ್ಥವಾಗಿ ಎದುರಿಸುವಂತಾಗಿದ್ದು.
ಈ ಯೋಜನೆಗಳು ಇಲ್ಲದ್ದಿದ್ದರೆ ಅಂತಾ ಒಮ್ಮೆ ಯೋಚನೆ ಮಾಡಿ. ಅಬ್ಬಾ!!!. ಬಹು ದೊಡ್ಡ ಗಂಡಾಂತರಿಂದ ನಾವು ಹೊರಬರ್ತಿದೇವೆ.
ಭವಿಷ್ಯದ ರೋಗ ರುಜಿನ ಅಥವಾ ಅಪಾಯಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಿ ಕೊಡಲಾರದಷ್ಟು ಸ್ವಾರ್ಥ ಅವಿವೇಕಿಗಳಾದರೆ ನಮ್ಮ ಸಾವಿಗೆ ನಾವೇ ಕುಣಿ ತೊಡಿದಂತೆ....
ಮನ ಮುಟ್ಟುವ ಕಹಿ ಸತ್ಯ
ReplyDeleteಒಳ್ಳೆಯ ಉದಾಹರಣೆ.
ReplyDeleteನಿನ್ನ ಪ್ರಯತ್ನ ಸದಾಕಾಲವೂ ಮುಂದುವರೆಯಲಿ.
Jai Hind
ಅತ್ಯುತ್ತಮ ಬರಹ
ReplyDeleteಸತ್ಯವಾದ ಮಾತು
ReplyDeleteಸತ್ಯ ಕನ್ನಡಿ, ಗೆಳೆಯಾ ಬರೆಯುತ್ತಲೇ ಇರೂ, ಹೃತ್ಪೂರ್ವಕ ಅಭಿನಂದನೆಗಳು.
ReplyDeleteಅದ್ಬುತ ಪ್ರಯತ್ನ
ReplyDeleteಉತ್ತಮ
ReplyDelete