ಒಂದಾನೊಂದು ಕಾಲದಲ್ಲಿ"ಹಸ್ತಲಾಘವ"
ಪ್ರಪಂಚ ಇಂದು ವೈರಸ್ ಕಾರಣದಿಂದ ನರಳ್ತಾಇದೆ. ಸಾಮಾನ್ಯರಿಂದ ಅಸಮಾನ್ಯ ಜನರು ಈ ವೈರಸಿಂದ ಪಡಬಾರದ ವ್ಯಥೆ ಪಡ್ತಿದಾರೆ. ನೆನಪಿರಲಿ ಆಕಸ್ಮಾತ್ ಈ ವೈರಸ್ ಕೇವಲ ಪ್ರಪಂಚದ ಯಾವುದೇ ಒಂದುಪ್ರದೇಶಕ್ಕೆ ಸೀಮಿತವಾಗಿದ್ದಲ್ಲಿ ಶ್ರೀಮಂತರ ದರ್ಬಾರು ಮತ್ತು ದೌಲ್ಲತ್ತಿಗೇನು ಕಡಿಮೆ ಇರ್ತಿದಿಲ್ಲ. ಈ ವಿಚಾರದಲ್ಲಿ ಕೊರೋನಾ ಎಲ್ಲರಿಗೂ ಸಮಪಾಲು ಹಂಚಿದೆ. ನಾನು ಶ್ರೀಮಂತ, ಶಕ್ತಿವಂತ ಮತ್ತು ಸರ್ವಾಧಿಕಾರಿ ಅಂತಾ ಒಣ ಕೊಬ್ಬಿನಿಂದ ಮೆರೆದವರಿಗೆ ಕೊರೋನಾ ಶಕ್ತಿಯ ಪರಿಚಯ ಮಾಡಿಸಿದೆ. ಇರಲಿ ವಿಷಯ ಇದಲ್ಲ. ಈ ವೈರಸ್ ಕಾರಣದಿಂದ ಲಾಕ್ ಡೌನ್ ನಂತರದ ನಮ್ಮ ಜಿವನಶೈಲಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆಗೆ ಕಾರಣವಾಗುತ್ತಿದೆ, ಅದರಲ್ಲಿ ಕೆಲವು ಧನಾತ್ಮಕ ಮತ್ತು ಇನ್ನಕೇಲವು ಋಣಾತ್ಮಕ. ಭರತಭೂಮಿ ಇಷ್ಟು ದಶಕಗಳ ಕಾಲ ಪ್ರಕೃತಿ ವಿರುದ್ಧವಾದ ನಮ್ಮ ಕೆಲಸಗಳನ್ನು ಸಹಿಸಿಕೊಂಡು ಬಂದಿದೆ. ಈಗ ವೈರಸ್ ಕಾರಣದಿಂದ ಅನಿವಾರ್ಯವಾಗಿ ಅಥವಾ ಬಲವಂತವಾಗಿ ನಾವು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಆಗಲೆಬೇಕು. ಅದರಲ್ಲಿ ಮೊದಲನೆಯದಾಗಿ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದು ನಮಸ್ಕರಿಸುವುದು. ಈ ವೈರಸ್ ಕಾರಣದಿಂದ "ಒಂದಾನೊಂದು ಕಾಲದಲ್ಲಿp ಹಸ್ತಲಾಘವ" ಅಂತ 'ಹಸ್ತಲಾಘವ' ಇ...